ಕನ್ನಡ ಹಾಡು ಮೆಚ್ಚಿ ಟ್ವೀಟ್ ಮಾಡಿದ ಸಂಗೀತ ದಿಗ್ಗಜ ಎಆರ್ ರೆಹಮಾನ್

ಬೆಂಗಳೂರು| Krishnaveni K| Last Modified ಭಾನುವಾರ, 17 ನವೆಂಬರ್ 2019 (08:57 IST)
ಬೆಂಗಳೂರು: ವಿಶ್ವ ಖ್ಯಾತಿಯ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಕನ್ನಡ ಸಿನಿಮಾದ ಹಾಡೊಂದನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ.

 
ಎನ್ನುವ ಸಿನಿಮಾದ ನಗುವ ಕಲಿಸು ಎಂಬ ಹಾಡು ಈಗ ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ. ಈ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಆ ಹಾಡು ರೆಹಮಾನ್ ತನಕ ತಲುಪಿದೆ.
 
ತಮ್ಮ ಟ್ವಿಟರ್ ಪೇಜ್ ನಲ್ಲಿ ಈ ಹಾಡನ್ನು ಮೆಚ್ಚಿ ರೆಹಮಾನ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಗಾಯಕಿ ಅನನ್ಯಾ ಭಟ್ ಪ್ರತಿಕ್ರಿಯಿಸಿದ್ದು, ನಿಮ್ಮಿಂದ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಗಿದೆ. ಧನ್ಯವಾದಗಳು ಎಂದಿದ್ದಾರೆ. ಮುಂದೊಂದು ದಿನ ಅನನ್ಯಾಗೆ ರೆಹಮಾನ್ ಕಡೆಯಿಂದ ಕರೆ ಬಂದರೂ ಅಚ್ಚರಿಯಿಲ್ಲ!
ಇದರಲ್ಲಿ ಇನ್ನಷ್ಟು ಓದಿ :