ಬೆಂಗಳೂರು: ಇತ್ತೀಚೆಗಷ್ಟೇ ಹೃದಯಾಘಾತವಾದ ಕಾರಣ ಕೆಲವು ದಿನಗಳ ಕಾಲ ವೃತ್ತಿರಂಗದಿಂದ ದೂರವಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಈಗ ಮತ್ತೆ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.ಚೇತರಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಜೀ ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋಗೆ ಮರಳಿದ್ದಾರೆ. ಇದಕ್ಕೂ ಮೊದಲು ಪ್ರೇಮ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಅರ್ಜುನ್ ಜನ್ಯಾ ಮತ್ತೆ ಕೆಲಸಕ್ಕೆ ಮರಳಿರುವ ವಿಚಾರವನ್ನು ಪ್ರಕಟಿಸಿದ್ದರು.ಈ ವಾರ ಸರಿಗಮಪ ಶೋನಲ್ಲಿ ಅವರಿಗೆ ಮತ್ತೆ ಭರ್ಜರಿಯಾಗಿ ಸುಸ್ವಾಗತ