ಬೆಂಗಳೂರು: ಸದ್ಯಕ್ಕೆ ಕನ್ನಡ ಸಿನಿಮಾಗಳಲ್ಲಿ ಮೆಲೊಡಿ ಹಾಡುಗಳ ಕಾರುಬಾರು ನಡೆಯುತ್ತಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. ಅವರೀಗ 100 ನೇ ಸಿನಿಮಾಗೆ ಸಂಗೀತ ನೀಡುವ ಸಂಭ್ರಮದಲ್ಲಿದ್ದಾರೆ.ಅರ್ಜುನ್ ಇಷ್ಟು ಬೇಗ ಶತಕ ಮಾಡಿಬಿಟ್ಟರಾ ಎಂದು ಅಚ್ಚರಿಯಾಗಬಹುದು. ಅವರ ಸಂಗೀತ ನಿರ್ದೇಶನದ ಚಿತ್ರಗಳು ಇದೀಗ ತಿಂಗಳಿಗೆ ಮೂರು-ನಾಲ್ಕು ಬಿಡುಗಡೆಯಾಗುತ್ತಲೇ ಇವೆ. ಅಚ್ಚರಿಯೆಂದರೆ ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗುತ್ತಿವೆ.ಮೊದಲ ಸಿನಿಮಾ ಅಟೋಗ್ರಾಫ್ ಪ್ಲೀಸ್ ಆದರೂ ಅವರಿಗೆ