ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾಗೆ ಕೊರೋನಾ

ಬೆಂಗಳೂರು| Krishnaveni K| Last Modified ಸೋಮವಾರ, 5 ಏಪ್ರಿಲ್ 2021 (10:23 IST)
ಬೆಂಗಳೂರು: ಕೊರೋನಾ ಎರಡನೇ ಅಲೆಗೆ ಮತ್ತೊಬ್ಬ ಸೆಲೆಬ್ರಿಟಿ ಟಾರ್ಗೆಟ್ ಆಗಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾಗೆ ಕೊರೋನಾ ಸೋಂಕು ದೃಢಪಟ್ಟಿದೆ.  
> ಸದ್ಯಕ್ಕೆ ಜನ್ಯಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಸಣ್ಣ ಪ್ರಮಾಣದ ಕೊರೋನಾ ಲಕ್ಷಣಗಳಿಂದ ಬಳಲುತ್ತಿರುವ ಅರ್ಜುನ್ ಜನ್ಯಾ ಮುನ್ನಚ್ಚೆರಿಕೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.>   ಕಳೆದ ವರ್ಷ ಜನ್ಯಾ ಆಂಜಿಯೋಪ್ಲಾಸ್ಟಿಗೊಳಗಾಗಿದ್ದರು. ಹೀಗಾಗಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಾಗಿರುವ ಅರ್ಜುನ್ ಜನ್ಯಾ ಮುಂದಿನ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳಲ್ಲ.ಇದರಲ್ಲಿ ಇನ್ನಷ್ಟು ಓದಿ :