ಕೊರೋನಾಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಹೋದರ ಬಲಿ

ಬೆಂಗಳೂರು| Krishnaveni K| Last Modified ಮಂಗಳವಾರ, 4 ಮೇ 2021 (09:16 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಹೋದರ ಕಿರಣ್ ಕೊರೋನಾಗೆ ಬಲಿಯಾಗಿದ್ದಾರೆ.
 

ತಮ್ಮ ಸಹೋದರನ ಸಾವಿನ ದುಃಖವನ್ನು ಅರ್ಜುನ್ ಜನ್ಯಾ ಹಂಚಿಕೊಂಡಿದ್ದಾರೆ. ‘ಕೊರೋನಾಗೆ ನನ್ನ ಸಹೋದರನನ್ನು ಕಳೆದುಕೊಂಡೆ. ನೀನಿಲ್ಲದ ದುಃಖವನ್ನು ಹೇಗೆ ಹೇಳಲಿ ಎಂದೇ ನನಗೆ ಗೊತ್ತಾಗುತ್ತಿಲ್ಲ. ನನ್ನ ಉಸಿರುವವರೆಗೂ ನೀನು ನನ್ನ ಜೊತೆಗಿರುವೆ’ ಎಂದು ಜನ್ಯಾ ಹೇಳಿದ್ದಾರೆ.
 
ಇದಕ್ಕೂ ಮೊದಲು ಅರ್ಜುನ್ ಜನ್ಯಾ ಕೂಡಾ ಕೊರೋನಾ ಸೋಂಕಿತರಾಗಿದ್ದರು. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ಗುಣಮುಖರಾಗಿದ್ದರು.
ಇದರಲ್ಲಿ ಇನ್ನಷ್ಟು ಓದಿ :