ಬೆಂಗಳೂರು: ಮೀ ಟೂ ಅಭಿಯಾನದಡಿಯಲ್ಲಿ ಬಹುಭಾಷಾ ತಾರೆ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ನಟಿ ಶೃತಿ ಹರಿಹರನ್ ಪ್ರಕರಣದ ಸಂಧಾನಸಭೆ ಗುರುವಾರ ನಡೆಯುವ ಸಾಧ್ಯತೆಯಿದೆ.ಇಬ್ಬರೂ ಮುಖಾಮುಖಿಯಾಗಿ ಕುಳಿತು ವಾಣಿಜ್ಯಮಂಡಳಿ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆಯಲಿದೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಹೇಳಿದ್ದಾರೆ.ಈ ಸಭೆಗೆ ಹಿರಿಯ ನಟ ಅಂಬರೀಷ್ ಮಧ್ಯಸ್ಥಿಕೆ ವಹಿಸಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅಂಬರೀಷ್ ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ಬಳಿಕ ಸಭೆ ನಡೆಸಿ