ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ 9 ನೇ ಎಸಿಎಂಎಂ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದ್ದು, ಈ ವಿವಾದದ ಬಗ್ಗೆ ರಕ್ಷಿತ್ ಸರಣಿ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಶಾಂತಿ ಕ್ರಾಂತಿ ಸಿನಿಮಾದ ಹಾಡೊಂದನ್ನು ಬಳಸಲಾಗಿದೆ ಎಂದು ಲಹರಿ ಸಂಸ್ಥೆ ನೀಡಿದ್ದ ದೂರಿನನ್ವಯ ಕೃತಿ ಚೌರ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಮತ್ತು ಅವರ ಪರಂವಾ ಸ್ಟುಡಿಯೋ ವಿರುದ್ಧ ವಾರಂಟ್