ಅಖಂಡ ಎರಡು ವರ್ಷಗಳ ಕಾಲ ನಿರಂತರವಾದಶ್ರದ್ಧೆ, ಪರಿಶ್ರಮಗಳಿಂದ ರೂಪುಗೊಂಡಿರುವ ಚಿತ್ರ ಚೇಸ್. ಹೀಗೆ ಎರಡು ವರ್ಷಗಳ ಕಾಲ ತೆಗೆದುಕೊಂಡರೂ ಸಹ ಆ ಅವಧಿಯ ತುಂಬೆಲ್ಲ ಈ ಸಿನಿಮಾ ಕುತೂಹಲವನ್ನು ಸದಾಚಾಲ್ತಿಯಲ್ಲಿಟ್ಟುಕೊಂಡೇ ಸಾಗಿ ಬಂದಿತ್ತು. ಅದು ಅದರ ಕಂಟೆಂಟಿನ ತಾಕತ್ತೆಂದರೂ ಅತಿಶಯವಲ್ಲ. ಹೀಗೆ ಸಾಗಿ ಬಂದಿದ್ದ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.ಅದರಲ್ಲಿ ಕಾಣಿಸಿದ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥೆಯ ಝಲಕ್ಕುಗಳನ್ನು ಕಂಡುಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಈ ಮೂಲಕವೇ ಚೇಸ್ನಲ್ಲಿರೋ ಪಾತ್ರ