ಬೆಂಗಳೂರು: ಮದಗಜ ನಾಯಕಿ, ನಟಿ ಆಶಿಕಾ ರಂಗನಾಥ್ ಶೂಟಿಂಗ್ ನ ಸವಿನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಶೂಟಿಂಗ್ ವೇಳೆ ಟ್ರ್ಯಾಕ್ಟರ್ ಚಲಾಯಿಸಿ ಪಕ್ಕಾ ಹಳ್ಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದ ವಿಡಿಯೋಗಳನ್ನು ಆಶಿಕಾ ಹಂಚಿಕೊಂಡಿದ್ದಾರೆ.ಜೊತೆಗೆ ಈ ಸಿನಿಮಾ ನನಗೆ ವಿಶೇಷ ಅನುಭವ ಕೊಟ್ಟಿತು. ಈ ಪಾತ್ರಕ್ಕಾಗಿ ಪಟ್ಟ ಪರಿಶ್ರಮ, ಪ್ರೀತಿ ದೊಡ್ಡದಿತ್ತು. ಇಂದು ಕರ್ನಾಟಕದಾದ್ಯಂತ ಜನ ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ಅದೇ ಪರಿಶ್ರಮದ ಫಲ.