ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮನ ಕಾರ್ಯಕ್ರಮಕ್ಕೆ ಮುನ್ನ ಪತ್ನಿ ಅಶ್ವಿನಿ ಅಭಿಮಾನಿಗಳಿಗೆ ಬರೆದ ಪತ್ರವೊಂದು ವೈರಲ್ ಆಗಿದೆ.ಅಶ್ವಿನಿ ಪುನೀತ್ ಇಷ್ಟು ದಿನ ತಮ್ಮ ಜೊತೆಗಿದ್ದು, ತಾವೂ ನೋವು ಅನುಭವಿಸಿದ ಅಭಿಮಾನಿಗಳಿಗೆ ಪತ್ರಮುಖೇನ ಧನ್ಯವಾದ ಸಲ್ಲಿಸಿದ್ದಾರೆ.ಪುನೀತ್ ಅಗಲುವಿಕೆ ನಮ್ಮಷ್ಟೇ ನಿಮಗೂ ನೋವು ತಂದಿದೆ ಎಂದು ನನಗೆ ಗೊತ್ತು. ಆದರೆ ಇಂಥಾ ಕಠಿಣ ಪರಿಸ್ಥಿತಿಯಲ್ಲೂ ನೋವು ನುಂಗಿ ಎಲ್ಲಾ ಕಾರ್ಯಗಳನ್ನು ಶಾಂತ ರೀತಿಯಲ್ಲಿ ಮಾಡಲು ಅನುವು ಮಾಡಿಕೊಟ್ಟ ನಿಮಗೆ