ಬೆಂಗಳೂರು: ಜನರಿಗೆ ನಟ-ನಟಿಯರ ಜತೆ ಸೆಲ್ಫಿ ತೆಗೆದುಕೊಳ್ಳುವುದೆಂದರೆ ಅದೇನೋ ಕ್ರೇಜ್. ಈ ಸೆಲ್ಫಿ ಹುಚ್ಚಿನಿಂದ ಸಾಕಷ್ಟು ಅವಾಂತರಗಳು ಆಗಿವೆ. ಈಗ ಅಂತದ್ದೇ ಮತ್ತೊಂದು ಘಟನೆ ವಿಜಯನಗರದ ಮಾರುತಿ ಮಂದಿರದ ಬಳಿ ನಡೆದಿದೆ. ಕಿರುತೆರೆಯ ನಾಗಿಣಿ ಧಾರಾವಾಹಿ ನಾಯಕ ದೀಕ್ಷಿತ್ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸೆಲ್ಫಿ ನೀಡಲು ನಿರಾಕರಿಸಿದ್ದಕ್ಕೆ ನಾಗಿಣಿ ಧಾರವಾಹಿಯ ನಾಯಕ ದೀಕ್ಷಿತ್ ಅವರ ಕಾರಿನ ಗಾಜನ್ನು ಪುಡಿ ಮಾಡಲಾಗಿದೆ ದೀಕ್ಷಿತ್ ಜತೆ ಸೆಲ್ಫಿ ತೆಗೆಸಿಕೊಳ್ಳಬೇಕೆಂದು ಪಲ್ಸರ್