Widgets Magazine

ಯುರೋಪ್ ಗೂ ತಲುಪಿದ ಅವನೇ ಶ್ರೀಮನ್ನಾರಾಯಣ ಯಾತ್ರೆ

ಬೆಂಗಳೂರು| Krishnaveni K| Last Modified ಗುರುವಾರ, 16 ಜನವರಿ 2020 (09:57 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ‍್ರೀಮನ್ನಾರಾಯಣ ಸಿನಿಮಾ ಹೊರದೇಶದಲ್ಲೂ ಮೋಡಿಮಾಡುತ್ತಿದೆ. ಮಲೇಷ್ಯಾ, ಕೌಲಾಲಂಪುರದಲ್ಲಿ ಬಿಡುಗಡೆಯಾಗಿ ಇದೀಗ ದುಬೈ, ಯುರೋಪ್ ಗೂ ಕಾಲಿಡುತ್ತಿದೆ.
 

ಈ ವಾರಂತ್ಯದಲ್ಲಿ ದುಬೈ ಮತ್ತು ಸ್ಕಾಟ್ ಲ್ಯಾಂಡ್, ಐರ್ಲೆಂಡ್ ಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಆನ್ ಲೈನ್ ಬುಕಿಂಗ್ ಕೂಡಾ ಪ್ರಾರಂಭವಾಗಿದೆ.
 
ಈ ಭಾನುವಾರ ಸ್ಕಾಟ್ ಲ್ಯಾಂಡ್ ಮತ್ತು ಐರ್ಲೆಂಡ್ ನಲ್ಲಿ ಒಂದು ಶೋ ನಡೆಯಲಿದೆ. ಈಗಾಗಲೇ ಮಲೇಷ್ಯಾ, ಕೌಲಾಲಂಪುರದಿಂದ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದೆ. ಹಿಂದಿಯಲ್ಲಿ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಪ್ರೇಕ್ಷಕರೇ ಕೇಳುತ್ತಿದ್ದಾರೆ. ಒಟ್ಟಾರೆ ರಕ್ಷಿತ್ ಮೊಗದಲ್ಲಿ ಖುಷಿ ತಂದಿದೆ.
ಇದರಲ್ಲಿ ಇನ್ನಷ್ಟು ಓದಿ :