ಅಖಂಡ ಎರಡ್ಮೂರು ವರ್ಷಗಳ ನಿರಂತರ ಪರಿಶ್ರಮ ಮತ್ತು ಅಷ್ಟೇ ಕಾಲದಿಂದ ಪ್ರೇಕ್ಷಕ ವರ್ಗದಲ್ಲಿ ಮನೆ ಮಾಡಿಕೊಂಡಿರುವ ಕಾತರಗಳೆಲ್ಲ ಸಾಕಾರಗೊಳ್ಳುವ ಕ್ಷಣಗಳು ಹತ್ತಿರಾಗುತ್ತಿವೆ. ಈ ವಾರವೇ ಬಹು ನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರ ತೆರೆಗಾಣುತ್ತಿದೆ. ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ನಂತರ ಈ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಕೆಜಿಎಫ್ ನಂತರದಲ್ಲಿ ಪ್ಯಾನಿಂಡಿಯಾ ಲೆವೆಲ್ಲನಲ್ಲೊಂದು ದಾಖಲೆ ಸೃಷ್ಟಿಸುತ್ತದೆಂಬಂಥಾ ಗಾಢ ನಂಬಿಕೆಗೆ ಕಾರಣವಾಗಿರುವ ಈ ಚಿತ್ರ ತೆರೆಗಾಣುವ ಕ್ಷಣದ ಕೌಂಟ್ಡೌನ್