ದಿಡೀರ್ ಆಗಿ ಮುಂದಕ್ಕೆ ಹೋಯ್ತು ಆಯುಷ್ಮಾನ್ ಭವ ರಿಲೀಸ್ ಡೇಟ್

ಬೆಂಗಳೂರು| Krishnaveni K| Last Modified ಮಂಗಳವಾರ, 29 ಅಕ್ಟೋಬರ್ 2019 (10:25 IST)
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ರಾಜ್ಯೋತ್ಸವದಂದು ಅಂದರೆ ನವಂಬರ್ 1 ರಂದು ಬಿಡುಗಡೆಯಾಗುತ್ತದೆ ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ಸಿಕ್ಕಿದೆ.

 
ಆಯುಷ್ಮಾನ್ ಭವ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ತಾಂತ್ರಿಕ ಕಾರಣಗಳಿಂದಾಗಿ ಚಿತ್ರದ ರಿಲೀಸ್ ನವಂಬರ್ 1 ರಂದು ಆಗುತ್ತಿಲ್ಲ ಎಂದು ಚಿತ್ರತಂಡ ಪ್ರಕಟಿಸಿದೆ. ಇದು ಶಿವಣ್ಣ ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ.
 
ಹಾಗಂತ ಹೆಚ್ಚು ದಿನ ಕಾಯಬೇಕಾಗಿಲ್ಲ. ನವಂಬರ್ 1 ರ ಬದಲಾಗಿ ನವಂಬರ್ 15 ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :