ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಟ್ರೆಲರ್ ಗ್ರ್ಯಾಂಡ್ ರಿಲೀಸ್ ಆಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಚಿತ್ರದ ಟ್ರೇಲರ್ ಆಂಧ್ರ ಮತ್ತು ತೆಲಂಗಾಣದ 300ಕ್ಕೂ ಅಧಿಕ ಥಿಯೇಟರ್`ಗಳಲ್ಲಿ ರಿಲೀಸ್ ಆಗಿದ್ದು, ಅದಕ್ಕೂ ಮುನ್ನವೇ ಆನ್`ಲೈನ್`ನಲ್ಲಿ ಹಿಂದಿ ಟ್ರೇಲರ್ ಫೇಸ್ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್`ನಲ್ಲಿ ಲೀಕ್ ಆಗಿದೆ ಎಂಬ ಸುದ್ದಿ ಹರಡಿತ್ತು. ಬಾಹುಬಲಿಯನ್ನ ಕಟ್ಟಪ್ಪ ಕೊಂದಿದ್ದೇಕೆ ಎಂಬ ಕುತೂಹಲವಿರುವ ಈ ಚಿತ್ರ ವಿಶ್ವಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ.ಟ್ರೇಲರ್`ನಲ್ಲಿ ಈ ಪ್ರಶ್ನೆಗೆ ಸಂಬಂಧಿಸಿದ ವಿಷಯಗಳೂ ಬಂದುಹೋಗುತ್ತವೆ.