ಬಬ್ರೂ: ಒಂದು ಕಾರಿನಲ್ಲಿ ನೂರು ದಿಕ್ಕಿನ ಪಯಣ!

ಬೆಂಗಳೂರು, ಸೋಮವಾರ, 2 ಡಿಸೆಂಬರ್ 2019 (17:01 IST)

ಸುಮನ್ ನಗರ್ಕರ್ ನಿರ್ಮಾಣ ಮಾಡಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಬಬ್ರೂ ಚಿತ್ರ ಡಿಸೆಂಬರ್ 6ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಶೀರ್ಷಿಕೆಯಲ್ಲಿಯೇ ಅದೆಂಥಾದ್ದೋ ಆಕರ್ಷಣೆ ಇಟ್ಟುಕೊಂಡಿರೋ ಈ ಚಿತ್ರ ಈಗಾಗಲೇ ನಾನಾ ದಿಕ್ಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.
babroo

ಒಂದು ಉತ್ಸಾಹಿ ಸಿನಿಮಾ ವ್ಯಾಮೋಹಿಗಳ ತಂಡ ಸೇರಿಕೊಂಡು ರೂಪಿಸಿರೋ ಬಬ್ರೂ ಭಿನ್ನವಾದ ಕಥೆಯ ಸಿನಿಮಾ ಅನ್ನೋದು ಟ್ರೇಲರ್ನೊಂದಿಗೆ ಎಲ್ಲರಿಗೂ ಮನದಟ್ಟಾಗಿದೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸಾ ಅಲೆಯ ಸಿನಿಮಾಗಳ ಹಂಗಾಮಾ ಶುರುವಾಗಿದೆಯಲ್ಲಾ? ಆ ಸಾಲಿನಲ್ಲಿ ಸೇರ್ಪಡೆಗೊಳ್ಳುವಂಥಾ ಹೊಸತನಗಳಿಂದ ಮೂಡಿ ಬಂದಿರುವ ಚಿತ್ರ ಬಬ್ರೂ.
babroo
ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್ನಗರ್ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ಬಬ್ರೂ ನಿರ್ಮಾಣಗೊಂಡಿದೆ. ಇಲ್ಲಿ ಸುಮನ್ ನಗರ್ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಹಾಗಾದರೆ ಈ ಸಿನಿಮಾದ ಅಸಲೀ ಕಥೆಯೇನು, ಇಲ್ಲಿ ಯಾವ ಬಗೆಯ ಕಥಾನಕವಿದೆ ಎಂಬೆಲ್ಲ ವಿಚಾರಗಳು ಟ್ರೇಲರ್ನಲ್ಲಿನ ಸುಳಿವುಗಳ ಹೊರತಾಗಿಯೂ ಪ್ರೇಕ್ಷಕರನ್ನು ಕಾಡುತ್ತಿದೆ. ಈ ಕುರಿತಾಗಿ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಚಿತ್ರತಂಡ ತೆರೆದಿಟ್ಟಿದೆ.
babroo
ಬಹುಕಾಲದ ಬಳಿಕ ಬಬ್ರೂ ಮೂಲಕ ಬಣ್ಣ ಹಚ್ಚುತ್ತಿರುವ ಸುಮನ್ ನಗರ್ಕರ್ ವಿಭಿನ್ನವಾದೊಂದು ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಖುಷಿಯಿಂದಿದ್ದಾರೆ. ಬಬ್ರೂವಿನ ಕಥೆ ಸುಮನ್ ನಗರ್ಕರ್ ನಟಿಸಿರೋ ಸನಾ ಎಂಬ ಪಾತ್ರ ಹಾಗೂ ಮಹಿ ನಿರ್ವಹಿಸಿರುವ ಅರ್ಜುನ್ ಎಂಬ ಪಾತ್ರಗಳ ಸುತ್ತ ತಿರುಗುವಂಥಾ ಕಥೆಯನ್ನೊಳಗೊಂಡಿದೆ. ಇಲ್ಲಿ ಸನಾ ಎಂಬ ಪಾತ್ರ ಗಂಡನಿಂದಲೇ ಕಿರುಕುಳಕ್ಕೊಳಗಾಗಿ ರಿಲೀಫು ಬಯಸುವ ಪಾತ್ರ. ಆಕೆ ಆ ಒತ್ತಡಗಳಿಂದ ಕಳಚಿಕೊಳ್ಳುವ ಸಲುವಾಗಿ ದೂರದ ಪ್ರದೇಶಕ್ಕೆ ಗೊತ್ತುಗುರಿ ಇಲ್ಲದ ಯಾನ ಹೊರಟಿರುತ್ತಾಳೆ. ಅರ್ಜುನ ಸೋಂಭೇರಿತನವನ್ನೇ ಹೊದ್ದುಕೊಂಡು ತಾನೂ ಕೂಡಾ ದಿಕ್ಕಿಲ್ಲದ ಪಯಣಕ್ಕಣಿಯಾಗುತ್ತಾನೆ. ಇವರಿಬ್ಬರ ಪಯಣಕ್ಕೆ ಸಿಗೋದು ಒಂದೇ ಕಾರು. ಹಾಗಿ ಅನಿವಾರ್ಯವಾಗಿ ಒಟ್ಟಿಗೆ ಪಯಣ ಹೊರಟ ಇವರಿಬ್ಬರನ್ನು ಅನಿರೀಕ್ಷಿತ ಘಟನಾವಳಿಗಳು ಎದುರುಗೊಳ್ಳುತ್ತವೆ. ಅದರಲ್ಲಿಯೇ ಈ ಕಥೆಯ ರೋಚಕ ಅಧ್ಯಾಯಗಳು ಅಡಗಿವೆ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಐರಾ ಯಶ್ ಬರ್ತ್ ಡೇಗೆ ಅಭಿಮಾನಿಗಳ ಅನ್ನದಾನ

ಬೆಂಗಳೂರು: ಇನ್ನೂ ಅಂಬೆಗಾಲಿಡುತ್ತಿರುವ ಮಗು ಆದರೂ ಸ್ಟಾರ್ ದಂಪತಿ ಮಗು ಎನ್ನುವ ಕಾರಣಕ್ಕೆ ಐರಾ ಯಶ್ ಎಲ್ಲರ ...

news

ಹಿರಿಯ ಕಲಾವಿದರಿಗೆ ಕಥಾ ಸಂಗಮ ವಿಶೇಷ ಪ್ರದರ್ಶನ ನೀಡಿದ ರಿಷಬ್ ಶೆಟ್ಟಿ

ಬೆಂಗಳೂರು: ಏಳು ನಿರ್ದೇಶಕರು ಏಳು ಕತೆಗಳು ಮತ್ತು ಸಂಗೀತ ನಿರ್ದೇಶಕರು ಒಂದೇ ಸಿನಿಮಾಕ್ಕಾಗಿ ಕೆಲಸ ಮಾಡಿದ ...

news

ಮೆಲ್ಬೋರ್ನ್ ನಲ್ಲಿ ನಟ ಉಪೇಂದ್ರಗೆ ಗೌರವ ಸನ್ಮಾನ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕ ಉಪೇಂದ್ರ ಸದ್ಯಕ್ಕೆ ಆಸ್ಟ್ರೇಲಿಯಾ ...

news

ಜಗ್ಗೇಶ್ ಕೊಡುತ್ತಿದ್ದ ಕಾಟ ತಡೆಯಲಾಗದೇ ದೊಣ್ಣೆ ಹಿಡಿದಿದ್ದರಂತೆ ಪುಟ್ಟಣ್ಣ ಕಣಗಾಲ್

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್ ಅವರಿಗೆ ನಿನ್ನೆ ಜನ್ಮ ...