ಬೆಂಗಳೂರು: ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ 2 ಬಿಡುಗಡೆಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ಏಪ್ರಿಲ್ 28 ರಂದು ಚಿತ್ರ ಬಿಡುಗಡೆಯಾಗಲಿದೆ. ಆದರೆ ಕರ್ನಾಟಕದಲ್ಲಿ ಬಿಡುಗಡೆಯಾಗುವುದು ಡೌಟು. ಕಾರಣ ತಮಿಳು ನಟ ಸತ್ಯರಾಜ್. ಅವರೇನು ಮಾಡಿದರು ಎಂಬ ಸಂಶಯವೇ? ಅವರ ಹೇಳಿಕೆಯೊಂದರಿಂದ ಈ ಅವಾಂತರವಾಗಿದೆ. ಕಾವೇರಿ ಗಲಭೆ ಸಂದರ್ಭ ಸತ್ಯರಾಜ್ ಕರ್ನಾಟಕದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯೊಂದರ ಕಾರಣ ಈ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಬಾರದು ಎಂದು ಕನ್ನಡ ಸಂಘಟನೆಗಳು