ಬಹುಶಃ ಶೂಟಿಂಗ್ನಲ್ಲೂ ಬಾಹುಬಲಿ ದಾಖಲೆ ಬರೆದಿದ್ದಾನೆ. ಸಾಮಾನ್ಯವಾಗಿ ಎರಡು ಹಂತಗಳ ಶೂಟಿಂಗ್ ಅಬ್ಬಬ್ಬಾ ಅಂದ್ರೆ ಒಂದೂವರೆ ಅಥವಾ ಎರಡು ತಿಂಗಳಲ್ಲಿ ಫಿನಿಶ್ ಆಗುತ್ತದೆ. ಆದರೆ ಬಾಹುಬಲಿ 2 ಚಿತ್ರಕ್ಕಾಗಿ ಎಸ್.ಎಸ್ ರಾಜಮೌಳಿ ತೆಗೆದುಕೊಂಡಿದ್ದು ಮೂರುವರೆ ವರ್ಷ. ಚಿತ್ರತಂಡ ಶೂಟಿಂಗ್ ಮುಗಿದ ಮೇಲೆ ಭಾವುಕರಾದರಂತೆ. ಇಷ್ಟು ದೊಡ್ಡ ಚಿತ್ರಕ್ಕೆ ಕೆಲಸ ಮಾಡಿದ ತೃಪ್ತಿ ಅವರಲ್ಲಿ ಕಾಣುತ್ತಿತ್ತು. ಇಡೀ ದೇಶವೇ ಎದುರು ನೋಡುತ್ತಿರುವ ಚಿತ್ರದಲ್ಲಿ ಕೆಲಸ ಮಾಡಿದ ಹೆಮ್ಮೆ ಅವರದು.