ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ನಿನ್ನೆಯ ಕಿಚ್ಚನ ಪಂಚಾಯ್ತಿಯಲ್ಲಿ ಸಂಗೀತಾ ಮತ್ತು ಸ್ನೇಹಿತ್ ಗೆ ಸುದೀಪ್ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.ಈ ವಾರ ಇಬ್ಬರೂ ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾಗಿದ್ದರು. ನಿರೀಕ್ಷೆಯಂತೇ ಇಬ್ಬರನ್ನೂ ಕಿಚ್ಚ ತರಾಟೆಗೆ ತೆಗೆದುಕೊಂಡಿದ್ದಾರೆ. ಆರಂಭದಲ್ಲೇ ಇದೇ ವಿಚಾರವಿಟ್ಟುಕೊಂಡೇ ಇಂದಿನ ಪಂಚಾಯ್ತಿ ಎಂದು ಸುದೀಪ್ ಹೇಳಿದ್ದರು.ಅದರಂತೆ ಈ ವಾರ ಕಾರ್ತಿಕ್ ರನ್ನು ಬೇಕೆಂದೇ ಟಾರ್ಗೆಟ್ ಮಾಡಿ ಟಾಸ್ಕ್ ನೀಡಿದ್ದ ಸಂಗೀತಾಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು.