ಬಿಗ್ ಬಾಸ್: ದೊಡ್ಮನೆಗೆ ಪುಟ್ಟ ಹುಡುಗಿ ಚಂದನಾ ಕ್ಯಾಪ್ಟನ್, ಚಂದನ್ ನಾಮಿನೇಷನ್ ದಾಖಲೆ

ಬೆಂಗಳೂರು| Krishnaveni K| Last Modified ಮಂಗಳವಾರ, 10 ಡಿಸೆಂಬರ್ 2019 (10:33 IST)
ಬೆಂಗಳೂರು: ಬಿಗ್ ಬಾಸ್ ಮನೆಗೆ ಈ ವಾರ ಚಂದನಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ನೀಡಿದ್ದ ಬ್ಯಾಲೆನ್ಸ್ ಟಾಸ್ಕ್ ನಲ್ಲಿ ವಿಜೇತರಾದ ಚಂದನಾ ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದಾರೆ.

 
ಮನೆಯಲ್ಲಿ ಎಲ್ಲರಿಂದ ಚಿಕ್ಕ ಹುಡುಗಿ ಎಂದೇ ಕರೆಯಿಸಿಕೊಳ್ಳುವ ಚಂದನಾ ಹೇಗೆ ಒಂದು ವಾರ ಕಾಲ ಮನೆ ನಿಭಾಯಿಸುತ್ತಾರೆ ಎನ್ನುವುದೇ ಕುತೂಹಲದ ವಿಚಾರ. ಚಂದನಾ ಬಹುಶಃ ಪ್ರತೀ ನಿರ್ಧಾರವನ್ನೂ ಶೈನ್, ವಾಸುಕಿ ಬಳಿ ಕೇಳಿ ತೆಗೆದುಕೊಳ್ಳಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕೆಯ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ.
 
ಇನ್ನೊಂದೆಡೆ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮತ್ತೆ ಚಂದನ್ ಆಚಾರ್ ನಾಮಿನೇಟ್ ಆಗಿ ದಾಖಲೆ ಮಾಡಿದ್ದಾರೆ. ಬಿಗ್ ಬಾಸ್ ಗೆ ಬಂದ ಮೇಲೆ ಪ್ರತೀ ವಾರವೂ ಅವರು ನಾಮಿನೇಟ್ ಆಗಿರುವುದು ವಿಶೇಷ. ಈ ವಾರ ಒಟ್ಟು ಏಳು ಮಂದಿ ನಾಮಿನೇಟ್ ಆಗಿದ್ದು ಅವರಲ್ಲಿ ಚೈತ್ರಾ ಕೋಟೂರು, ರಾಜು ತಾಳಿಕೋಟೆ, ವಾಸುಕಿ ವೈಭವ್, ಶೈನ್ ಶೆಟ್ಟಿ, ಕಿಶನ್, ಭೂಮಿ ಶೆಟ್ಟಿ ಕೂಡಾ ಸೇರಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :