ಬೆಂಗಳೂರು: ಇತ್ತೀಚೆಗೆ ನವರಸನಾಯಕ ಜಗ್ಗೇಶ್ ಯಾಕೋ ವಿವಾದಗಳಿಂದಲೇ ಸುದ್ದಿಯಾಗುತ್ತಿರುವುದು ವಿಪರ್ಯಾಸ. ಮೊನ್ನೆಯಷ್ಟೇ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿ ವಿವಾದಕ್ಕೀಡಾಗಿದ್ದ ಜಗ್ಗೇಶ್ ಈಗ ತಮ್ಮದೇ ಪಕ್ಷದ ನಾಯಕ, ನಟ ಬಿಸಿ ಪಾಟೀಲ್ ಜೊತೆಗೆ ಟ್ವಿಟರ್ ನಲ್ಲೇ ಚರ್ಚೆ ನಡೆಸಿದ್ದಾರೆ. ಜಗ್ಗೇಶ್ ಮೊನ್ನೆಯಷ್ಟೇ, ‘ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ. ಸಿನಿಮಾ ನೋಡಬೇಡಿ’ ಎಂದು ಹೇಳಿಕೆ ನೀಡಿದ್ದರು. ಇದು ಬಿಸಿ ಪಾಟೀಲ್ ಅಸಮಾಧಾನಕ್ಕೆ ಕಾರಣವಾಗಿದೆ. ‘ಜಗ್ಗೇಶ್ ಅವರೇ ಇಂತಹ ನಿರುತ್ಸಾಹಗೊಳಿಸುವ ಮಾತನಾಡಬೇಡಿ. ನಾನೊಬ್ಬ ಪುಟ್ಟ ಕಲಾವಿದನಾಗಿ ನಿಮ್ಮೊಂದಿಗೆ