ಚೆನ್ನೈ: ಕೆಜಿಎಫ್ 2 ಅಬ್ಬರದ ಎದುರು ಮಂಕಾದ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಈಗ ಒಟಿಟಿ ರಿಲೀಸ್ ಗೆ ರೆಡಿಯಾಗಿದೆ.ನೆಟ್ ಫ್ಲಿಕ್ಸ್ ನಲ್ಲಿ ಬೀಸ್ಟ್ ಸಿನಿಮಾ ಬಿಡುಗಡೆಯಾಗಲಿದೆ. ಮೇ 11 ಕ್ಕೆ ಅಂದರೆ ಬೀಸ್ಟ್ ಥಿಯೇಟರ್ ನಲ್ಲಿ ರಿಲೀಸ್ ಆಗಿ ನಾಲ್ಕು ವಾರದ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಲಿದೆ.ಮೊದಲ ದಿನ ಥಿಯೇಟರ್ ನಲ್ಲಿ ಉತ್ತಮ ಗಳಿಕೆ ಮಾಡಿದ್ದ ಬೀಸ್ಟ್ ಎರಡನೇ ದಿನ ಕೆಜಿಎಫ್ ಬಿಡುಗಡೆಯಾದ ಬಳಿಕ ಕೊಂಚ ಹಿನ್ನಡೆ ಅನುಭವಿಸಿತ್ತು.