Widgets Magazine

ಸದ್ಯದಲ್ಲೇ ಶುರುವಾಗಲಿದೆ ಬೆಲ್ ಬಾಟಂ ಪಾರ್ಟ್ 2

ಬೆಂಗಳೂರು| Krishnaveni K| Last Modified ಮಂಗಳವಾರ, 17 ನವೆಂಬರ್ 2020 (09:35 IST)
ಬೆಂಗಳೂರು: ನಿರ್ದೇಶಕರಾಗಿ ಹೆಸರು ಮಾಡಿದ್ದ ರಿಷಬ್ ಶೆಟ್ಟಿಗೆ ನಾಯಕ ನಟನಾಗಿ ಬಡ್ತಿ ನೀಡಿದ ಸಿನಿಮಾ ಬೆಲ್ ಬಾಟಂ. ಈ ಸಿನಿಮಾದ ಎರಡನೇ ಭಾಗ ಮಾಡುವುದಾಗಿ ಶೆಟ್ಟರು ಈಗಾಗಲೇ ಘೋಷಿಸಿದ್ದರು.

 
ಇದೀಗ ಎರಡನೇ ಭಾಗ ಜನವರಿಯಲ್ಲಿ ಸೆಟ್ಟೇರುವುದು ಖಚಿತ ಎನ್ನಲಾಗಿದೆ. ಒಂದನೇ ಭಾಗದಲ್ಲಿದ್ದ ಕಥಾಪಾತ್ರಗಳೊಂದಿಗೇ ನಿರ್ದೇಶಕ ಜಯತೀರ್ಥ ಎರಡನೇ ಭಾಗವನ್ನು ಮಾಡಲು ಹೊರಟಿದ್ದಾರೆ. ಆದರೆ ಕಳೆದ ಬಾರಿಗಿಂತ ಕೊಂಚ ದೊಡ್ಡ ಮಟ್ಟದಲ್ಲೇ ಎರಡನೇ ಭಾಗ ಸಿನಿಮಾ ಮಾಡಲಿದ್ದಾರಂತೆ. ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ತಯಾರಿಯೂ ನಡೆದಿದೆ.
ಇದರಲ್ಲಿ ಇನ್ನಷ್ಟು ಓದಿ :