ಸ್ಮೈಲ್ಶ್ರೀನು ಮತ್ತು ಸ್ಟೈಲ್ವೀರೇಶ್ ಸೇರಿ ನಿರ್ಮಿಸುತ್ತಿರುವ ಚಿತ್ರ `ಬಳ್ಳಾರಿ ದರ್ಬಾರ್. ಕರ್ನಾಟಕ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾದ ಬಳ್ಳಾರಿ ಸದಾ ಸುದ್ದಿಯಲ್ಲಿರುವ ಜಿಲ್ಲೆ. ಅದರಲ್ಲೂ ರಾಜಕೀಯ ಕ್ಷೇತ್ರದಲ್ಲಿ ಸದಾ ಸುದ್ದಿಯಲ್ಲಿರುವ ಈ ಜಿಲ್ಲೆಯಲ್ಲಿ ಮೈನಿಂಗ್ ಪ್ರಮುಖ ಉದ್ಯಮ. ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿದ ಬಳ್ಳಾರಿಯಲ್ಲಿ ನಡೆದಂಥ ಒಂದಷ್ಟು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾದ ಚಿತ್ರ ಬಳ್ಳಾರಿ ದರ್ಬಾರ್. ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ನಿಂದ ಎ ಪ್ರಮಾಣ