ಬಳ್ಳಾರಿಯಲ್ಲಿ ನಡೆದಂಥ ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾದ ಚಿತ್ರ ಬಳ್ಳಾರಿ ದರ್ಬಾರ್ ಚಿತ್ರವು ಈ ವಾರ ಬಿಡುಗಡೆಯಾಗುತ್ತಿದೆ. ಬಳ್ಳಾರಿ ಎಂದರೆ ಸಾಮಾನ್ಯವಾಗಿ ಗಣಿ, ಕೆಲವು ರಾಜಕಾರಣಿಗಳ ದರ್ಬಾರ್ ಕಣ್ಣ ಮುಂದೆ ಬರುತ್ತದೆ. ಇದಕ್ಕೂ ಮುಂಚೆ ತೂಫಾನ್ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು ಈ ಚಿತ್ರದ ನಿರ್ದೇಶಕ ಸ್ಮೈಲ್ ಶ್ರೀನು. ಬಳಿಕ ಹೈದರಾಬಾದ್ನತ್ತ ಹೊರಳಿದ್ದರು. ಅಲ್ಲಿನ ಕೆಲ ನಿರ್ದೇಶಕರ ಬಳಿ ನಿರ್ದೇಶನದ ಮತ್ತಷ್ಟು ವರಸೆಗಳನ್ನು ಕಲಿತು ಬಂದಿದ್ದಾರೆ. ಕಥೆ, ಚಿತ್ರಕಥೆ,