ಪ್ರೊ ಕಬಡ್ಡಿ ಲೀಗ್ ನಲ್ಲಿ ಶ್ರೀ ಮುರಳಿ ಭರಾಟೆ ಟೀಂ

ಬೆಂಗಳೂರು| Krishnaveni K| Last Modified ಶನಿವಾರ, 7 ಸೆಪ್ಟಂಬರ್ 2019 (11:02 IST)
ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರು ಇತ್ತೀಚೆಗೆ ತಮ್ಮ ಸಿನಿಮಾ ಪ್ರಚಾರಕ್ಕೆ ಪ್ರೊ ಕಬಡ್ಡಿ ಲೀಗ್ ನ್ನು ವೇದಿಕೆ ಮಾಡಿಕೊಂಡಂತಿದೆ.  
> ಮೊನ್ನೆಯಷ್ಟೇ ನಟಿ ಹರಿಪ್ರಿಯಾ ತಮ್ಮ ಕನ್ನಡ್ ಗೊತ್ತಿಲ್ಲ ತಂಡದ ಜತೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಮೈದಾನದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಾಲ್ಗೊಂಡು ಬೆಂಗಳೂರು ಬುಲ್ಸ್ ಗೆ ಚಿಯರ್ ಮಾಡುವುದರ ಜತೆಗೆ ತಮ್ಮ ಸಿನಿಮಾ ಪ್ರಚಾರದ ಕೆಲಸವನ್ನೂ ಮಾಡಿಕೊಂಡಿದ್ದರು.>   ಇದೀಗ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸರದಿ. ಶ್ರೀಮುರಳಿ ಭರಾಟೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದ ಪ್ರಚಾರಕ್ಕಾಗಿ ನಿನ್ನೆ ನಡೆದ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಪಂದ್ಯಕ್ಕೆ ಹಾಜರಾಗಿದ್ದರು. ಈ ಪಂದ್ಯವನ್ನು ಬೆಂಗಳೂರು ಗೆದ್ದುಕೊಂಡಿತ್ತು. ತವರಿನ ತಂಡಕ್ಕೆ ಚಿಯರ್ ಮಾಡುವುದರ ಜತೆಗೆ ಶ್ರೀಮುರಳಿ ಮತ್ತು ಟೀಂ ತಮ್ಮ ಚಿತ್ರದ ಪ್ರಮೋಷನ್ ಕೆಲಸವನ್ನೂ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :