Widgets Magazine

ಭರತ ಬಾಹುಬಲಿ ಸಿನಿಮಾ ನೋಡಿದರೆ ಕೋಟಿ ಗೆಲ್ಲು ಅವಕಾಶ

ಬೆಂಗಳೂರು| Krishnaveni K| Last Modified ಗುರುವಾರ, 16 ಜನವರಿ 2020 (09:03 IST)
ಬೆಂಗಳೂರು: ಮಂಜು ಮಾಂಡವ್ಯ ಅವರ ನಟಿಸಿರುವ ಶ್ರೀ ಭರತ ಬಾಹುಬಲಿ ಸಿನಿಮಾ ನೋಡಿದವರಿಗೆ ಕೋಟಿ ಗೆಲ್ಲುವ ಅವಕಾಶ ಸಿಗಲಿದೆ.

 
ಇತ್ತೀಚೆಗೆ ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡಗಳು ಇಂತಹ ತಂತ್ರ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದೀಗ ಭರತ ಬಾಹುಬಲಿ ಸಿನಿಮಾ ತಂಡವೂ ಅದೇ ಕೆಲಸ ಮಾಡಿದೆ.
 
ಇದೇ ಶುಕ್ರವಾರ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗಲಿದ್ದು, ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ವೀಕ್ಷಿಸಿದರೆ ಈ ಆಫರ್ ಇದೆ. ಸಿನಿಮಾ ಟಿಕೆಟ್ ಜತೆಗೆ ನಿಮಗೆ ಒಂದು ಲಕ್ಕಿ ಕೂಪನ್ ನೀಡಲಾಗುತ್ತದೆ. ಅದರ ಮೇಲೆ ಏನನ್ನೂ ಬರೆಯದೇ ಜೋಪಾನವಾಗಿ ಇಟ್ಟುಕೊಂಡಿರಬೇಕು. 14 ದಿನಗಳ ಬಳಿಕ ಚಿತ್ರತಂಡ ಲಕ್ಕಿ ವಿಜೇತರ ಕೂಪನ್ ಮೇಲಿರುವ ಸಂಖ್ಯೆ ಘೋಷಣೆ ಮಾಡುತ್ತದೆ. ಅಂತಹವರಿಗೆ ಕಾರು ಅಥವಾ ಗೋಲ್ಡ್ ಕಾಯಿನ್ ವಿನ್ ಆಗುವ ಅವಕಾಶ ಸಿಗಲಿದೆ.




ಇದರಲ್ಲಿ ಇನ್ನಷ್ಟು ಓದಿ :