ಬೆಂಗಳೂರು: ಕಿರುತೆರೆಯಿಂದ ಹಿರಿತೆರೆಗೆ ನಟ-ನಟಿಯರು ಪ್ರಮೋಷನ್ ಪಡೆದ ಎಷ್ಟೋ ಕಲಾವಿದರಿದ್ದಾರೆ. ಆ ಸಾಲಿಗೆ ಈಗ ‘ಗೀತಾ’ ಧಾರವಾಹಿ ನಾಯಕಿ ಭವ್ಯಾ ಗೌಡ ಸೇರ್ಪಡೆಯಾಗುತ್ತಿದ್ದಾರೆ. ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ಗೀತಾ’ ಧಾರವಾಹಿಯಲ್ಲಿ ಗೀತಾ ಪಾತ್ರ ಮಾಡುತ್ತಿರುವ ನಟಿ ಭವ್ಯಾ ಈಗ ‘ಡಿಯರ್ ಕಣ್ಮಣಿ’ ಎನ್ನುವ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ಕಿಚ್ಚ ಸುದೀಪ್ ಚಿತ್ರಕ್ಕೆ ಚಾಲನೆ ನೀಡಿದ್ದು, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಆಡುವ ಕ್ರಿಕೆಟಿಗ ಪ್ರವೀಣ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.