ಮುಂಬೈ: ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ದಕ್ಷಿಣ ಭಾರತದ ಸ್ಟಾರ್ ನಟರ ಜತೆಗೆ ಒಂದು ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಬಿಗ್ ಬಿ ತಮ್ಮ ಬ್ಲಾಗ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.ಈ ಜಾಹೀರಾತಿನ ಚಿತ್ರೀಕರಣದಲ್ಲಿ ಕತ್ರಿನಾ ಕೈಫ್ ಮದುಮಗಳಾಗಿದ್ದರೆ, ಅಮಿತಾಭ್ ಮತ್ತು ಜಯಾ ತಂದೆ-ತಾಯಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಜಾಹೀರಾತು ಚಿತ್ರೀಕರಣದಲ್ಲಿ ತೆಲುಗು ನಟ ನಾಗಾರ್ಜುನ, ತಮಿಳು ನಟ ಪ್ರಭು ಮತ್ತು ಕನ್ನಡ ನಟ ಶಿವರಾಜ್ ಕುಮಾರ್ ಕೂಡಾ ಪಾಲ್ಗೊಂಡಿದ್ದಾರೆ.ಈ