ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಅಸ್ಪೃಶ್ಯರು ಎಂದು ಪದ ಬಳಸಿ ದಲಿತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಪರ್ಧಿ ಚೈತ್ರಾ ಕೋಟೂರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.ಚೈತ್ರಾ ಸಹಸ್ಪರ್ಧಿ ಹರೀಶ್ ರಾಜ್ ಜತೆಗೆ ಮಾತನಾಡುವಾಗ ನಾವೇನು ಅಸ್ಪೃಶ್ಯರಾ ಎಂದು ಹೇಳಿದ್ದು, ದಲಿತ ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿವಾದದ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದರು.ಈ ಬಗ್ಗೆ ಕನ್ ಫೆಷನ್ ರೂಂಗೆ ಬಂದು ಸಾರ್ವಜನಿಕವಾಗಿ ಚೈತ್ರಾ ಕ್ಷಮೆ ಯಾಚಿಸಿದ್ದು,