ಬಿಗ್ ಬಾಸ್ ಮನೆಯಲ್ಲಿ ಮೊದಲ ಮದುವೆ, ಮಗಳ ಕತೆ ಬಿಚ್ಚಿಟ್ಟ ನಟ ಜೈಜಗದೀಶ್

ಬೆಂಗಳೂರು| Krishnaveni K| Last Modified ಗುರುವಾರ, 24 ಅಕ್ಟೋಬರ್ 2019 (10:18 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ತಮ್ಮ ಜೀವನದಲ್ಲಿ ಯಾರಿಗಾದರೂ ಕ್ಷಮೆ ಕೇಳಬೇಕೆಂದರೆ ಕ್ಷಮೆ ಕೇಳುವ ಅವಕಾಶ ನೀಡಲಾಗಿದ್ದು, ನಟ ಜೈ ಜಗದೀಶ್ ತಮ್ಮ ವೈಯಕ್ತಿಕ ಜೀವನದ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
 

ಜೈ ಜಗದೀಶ್ ಪತ್ನಿ ವಿಜಯಲಕ್ಷ್ಮಿ ಸಿಂಗ್ ಹಾಗೂ ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿರುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಇದಕ್ಕಿಂತ ಮೊದಲು ಜೈ ಜಗದೀಶ್ ಗೆ ಮದುವೆಯಾಗಿತ್ತು ಅದು ದುರಾದೃಷ್ಟವಶಾತ್ ಬ್ರೇಕ್ ಅಪ್ ಆಗಿತ್ತು ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರಲು ಸಾಧ‍್ಯವಿಲ್ಲ.
 
ಈ ವಿಚಾರವನ್ನು ಸ್ವತಃ ಜೈ ಜಗದೀಶ್ ಬಿಚ್ಚಿಟ್ಟಿದ್ದಾರೆ. ಮೊದಲ ಪತ್ನಿ ಹೆಸರು ರೂಪಾ. ನಾವಿಬ್ಬರೂ ಪ್ರೀತಿಸಿ ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾದೆವು. ಆಗ ನಮಗೆ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ಮದುವೆಯಾಗಲು ಸಹಾಯ ಮಾಡಿದ್ದರು. ನಮ್ಮಿಬ್ಬರಿಗೆ ಒಬ್ಬಳು ಮಗಳೂ ಹುಟ್ಟಿದಳು.
 
ಆದರೆ ದುರಾದೃಷ್ಟವಶಾತ್ ನಾವಿಬ್ಬರೂ ಆರು ವರ್ಷದ ಬಳಿಕ ಭಿನ್ನಾಭಿಪ್ರಾಯದಿಂದಾಗಿ ದೂರವಾದೆವು. ಅದಾದ ಬಳಿಕ ಮಗಳು ಅವಳ ಅಮ್ಮನ ಜತೆ ಹೊರಟು ಹೋದಳು. ಮುಂದೆ ಅವಳಿಗೆ ಮದುವೆಯಾಯಿತು. ಆದರೆ ಅವಳ ವೈವಾಹಿಕ ಜೀವನವೂ ಅವಳ ಗಂಡನಿಂದಾಗಿ ಮುರಿದು ಬಿತ್ತು. ಈಗ ಅವಳಿಗೆ ಆಸರೆಯಾಗಬೇಕಿದ್ದ ಗಂಡನೂ ಇಲ್ಲ, ಅಪ್ಪನಾಗಿ ನಾನೂ ಇಲ್ಲ. ಅವಳ ಮನಸ್ಥಿತಿ ಹೇಗಿರಬಹುದು ಎಂದು ನೆನೆಸಿಕೊಂಡರೆ ನನಗೆ ಕೊರಗು ಕಾಡುತ್ತೆ. ನಮ್ಮಿಬ್ಬರ ತಪ್ಪಿನಿಂದ ಅವಳು ಸಂಕಟ ಅನುಭವಿಸುತ್ತಾಳೆ. ಮುಂದೆ ಅವಳು ಜೀವನದಲ್ಲಿ ಸೆಟ್ಲ್ ಆಗಲಿ ಎಂಬುದೇ ನನ್ನ ಆಸೆ ಎಂದು ಜಗದೀಶ್ ಕಣ್ಣೀರಿಡುತ್ತಾ ಆ ಮಗಳಿಗೆ ಕ್ಷಮೆ ಯಾಚಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :