ಬೆಂಗಳೂರು: ಬಿಗ್ ಬಾಸ್ ಸೀಸನ್ 7 ಸದ್ಯದಲ್ಲೇ ಆರಂಭವಾಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ಸುಳಿವು ನೀಡಿದ್ದು, ಅದರ ಪೂರ್ವ ತಯಾರಿಯನ್ನೂ ಶುರು ಮಾಡಿಕೊಂಡಿದೆ.ಈ ಬಾರಿಯೂ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಸ್ಪರ್ಧಿಗಳ ವಿಚಾರದಲ್ಲಿ ಕೊಂಚ ಬದಲಾವಣೆಯಾಗಲಿದೆ. ಈ ಬಾರಿ ಸಾಮಾನ್ಯ ಜನರಿಗೆ ಪ್ರವೇಶ ನೀಡದೇ ಇರಲು ವಾಹಿನಿ ನಿರ್ಧರಿಸಿದೆ. ಅದರ ಬದಲಾಗಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಎಂಟ್ರಿ ನೀಡಲಿದೆ.ಸಾಮಾನ್ಯ ಜನರಿಗಿಂತ ಸೆಲೆಬ್ರಿಟಿಗಳು ನಿಜ