ಬೆಂಗಳೂರು: ಬಿಗ್ ಬಾಸ್ ಕನ್ನಡ 5 ನೇ ಆವೃತ್ತಿಯಲ್ಲಿ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಮತ್ತು ಶ್ರುತಿ ಪ್ರಕಾಶ್ ಗೆಳೆತನ ಭಾರೀ ಜನಪ್ರಿಯವಾಗಿತ್ತು.ಬಿಗ್ ಬಾಸ್ ನಿಂದ ಹೊರಬಂದ ಮೇಲೆ ಜೆಕೆ ಹಿಂದಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿತ್ತು. ಅದರ ಬೆನ್ನಲ್ಲೇ ಇದೀಗ ಶ್ರುತಿ ಪ್ರಕಾಶ್ ಕಡೆಯಿಂದಲೂ ಅಂತಹದ್ದೇ ಸುದ್ದಿ ಬಂದಿದೆ. ಈಗಾಗಲೇ ಶ್ರುತಿ ಲಂಡನ್ ನಲ್ಲಿ ಲಂಬೋದರ ಎಂಬ ಕನ್ನಡ ಸಿನಿಮಾಗೆ ನಾಯಕಿಯಾಗಿದ್ದಾರೆ. ಅದರ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದೆ.