ವಾಣಿಜ್ಯೋದ್ಯಮಿ, ನಿರ್ಮಾಪಕ ವರುಣ್ ಮಣಿಯನ್ರನ್ನು ಮದುವೆಯಾಗುತ್ತಿರುವುದಾಗಿ ಈ ಹಿಂದೊಮ್ಮೆ ತ್ರಿಷಾ ಪ್ರಕಟಿಸಿದ್ದರು. ಇವರಿಬ್ಬರಿಗೂ ಅದ್ದೂರಿಯಾಗಿ ನಿಶ್ಚಿತಾರ್ಥವು ನಡೆದಿತ್ತು. ಆದರೆ ಸಿನಿಮಾಗಳಲ್ಲಿ ಅಭಿನಯಿಸಬೇಡವೆಂದು ವರುಣ್ ಹೇಳಿದ್ದ ಕಾರಣ ತ್ರಿಷಾ ಆತನೊಂದಿಗೆ ಸಂಬಂಧ ಮುರಿದುಕೊಂಡಿದ್ದರು. ಅಲ್ಲಿಗೆ ಅವರಿಬ್ಬರ ಮದುವೆ ಕನಸು ಮುರಿದುಬಿದ್ದಿತ್ತು. ಆದರೆ ಇತ್ತೀಚೆಗೆ ವರುಣ್ ಜತೆ ಮತ್ತೊಬ್ಬ ನಟಿ ಬಿಂದು ಮಾಧವಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಹತ್ತಿರವಾಗಿದ್ದಾರೆ ಎಂಬ ಸುದ್ದಿ ಇದೆ. ಇಬ್ಬರೂ ಜತೆಯಾಗಿರುವ ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ.