ರೋಹಿಣಿ ಸಿಂದೂರಿ ಬಯೋಪಿಕ್ ಸದ್ಯದಲ್ಲೇ ತೆರೆಗೆ

ಬೆಂಗಳೂರು| Krishnaveni K| Last Modified ಬುಧವಾರ, 9 ಜೂನ್ 2021 (10:06 IST)
ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಖಡಕ್ ಐಎಎಸ್ ಅಧಿಕಾರಿ ರೋಹಿಣಿ ಸಿಂದೂರಿ ಜೀವನಧಾರಿತ ಸಿನಿಮಾವೊಂದು ತೆರೆಗೆ ಬರಲಿದೆ.
 

‘ಭಾರತ ಸಿಂದೂರಿ’ ಎಂಬ ಟೈಟಲ್ ನಲ್ಲಿ ರೋಹಿಣಿ ಜೀವನಗಾಥೆ ಕುರಿತು ಸಿನಿಮಾ ಮಾಡಲು ನಾಲ್ವಡಿ ಕೃಷ್ಣರಾಜ್ ಒಡೆಯರ್ ಫಿಲಂಸ್ ಸಂಸ್ಥೆ ಮುಂದೆ ಬಂದಿದೆ.
 
ಲಾಕ್ ಡೌನ್ ಮುಗಿದ ಬೆನ್ನಲ್ಲೇ ಚಿತ್ರ ಸೆಟ್ಟೇರಲಿದೆ. ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ರೋಹಿಣಿ ಸಿಂದೂರಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಸಾಹಿತಿ ಕೃಷ್ಣ ಸ್ವರ್ಣಸಂದ್ರ ನಿರ್ದೇಶನ ಮಾಡಲಿದ್ದಾರೆ. ಕರ್ನಾಟಕದಲ್ಲಿ ತಾವು ಕೆಲಸ ಮಾಡಿದಲ್ಲೆಡೆ ಖಡಕ್ ನಿರ್ಧಾರಗಳಿಂದ ಸುದ್ದಿಯಾಗಿರುವ ರೋಹಿಣಿ ಜೀವನಗಾಥೆ ಯುವಜನರಿಗೆ ಸ್ಪೂರ್ತಿಯಾಗಬಲ್ಲದು ಎಂಬುದು ಚಿತ್ರತಂಡದ ಉದ್ದೇಶ.
ಇದರಲ್ಲಿ ಇನ್ನಷ್ಟು ಓದಿ :