ಬೆಂಗಳೂರು: ಯಾಕೋ ಜೂನ್ ತಿಂಗಳು ಸ್ಯಾಂಡಲ್ ವುಡ್ ಪಾಲಿಗೆ ಆಗಿ ಬರೋಲ್ಲವೆನಿಸುತ್ತದೆ. ಈ ತಿಂಗಳು ಕಳೆದ ಎರಡು ವರ್ಷಗಳಿಂದ ಕೆಟ್ಟ ಸುದ್ದಿಯನ್ನು ತರುತ್ತಿದೆ. ಕಳೆದ ವರ್ಷ ಜೂನ್ ನಲ್ಲಿ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದ್ದ ಚಿರು, ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ತುಂಬು ಗರ್ಭಿಣಿ ಮೇಘನಾ ಸರ್ಜಾರನ್ನು ಅಗಲಿದ್ದರು. ಈ ಪ್ರತಿಭಾವಂತ ನಟನ ಅಗಲುವಿಕೆ ಚಿತ್ರರಂಗಕ್ಕೆ ದೊಡ್ಡ ಆಘಾತ ತಂದಿತ್ತು.ಈ ವರ್ಷವೂ ಜೂನ್ ಮತ್ತೊಬ್ಬ ಪ್ರತಿಭಾವಂತ ನಟನನ್ನು