ಬಾಲಿವುಡ್ ನಟ ಸೋನು ಸೂದ್ , ಲಾಕ್ ಡೌನ್ ಸಮಯದಲ್ಲಿ ಹಲವರಿಗೆ ನೆರವಾಗಿದ್ದಾರೆ. ಇದೀಗ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟನಿಗೆ ಆರ್ಥಿಕವಾಗಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಹಿರಿಯ ನಟ ಅನುಪಮ ಶ್ಯಾಮ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರ್ಥಿಕ ಸಹಾಯ ಮಾಡುವಂತೆ ಕಲಾವಿದರ ಸಂಘಕ್ಕೆ ಅವರ ಕುಟುಂಬದವರು ಮನವಿ ಮಾಡಿಕೊಂಡಿದ್ದರು.ಇದೀಗ ಹಿರಿಯ ನಟನ ಕುಟುಂಬಕ್ಕೆ ನಟ ಸೋನು ಸೂದ್ ಆರ್ಥಿಕ ಸಹಾಯ ಮಾಡಿದ್ದಾರೆ.