ಸಂದರ್ಶನ ನಡೆಯುತ್ತಿರುವಾಗಲೇ ಸಂದರ್ಶಕರೊಬ್ಬರ ಕೆನ್ನೆಗೆ ಬಾಲಿವುಡ್ ನಟ ಬಾರಿಸಿರುವ ಘಟನೆ ನಡೆದಿದೆ. ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ರೇಡಿಯೋ ಜಾಕಿಯೊಬ್ಬರಿಗೆ ಹೊಡೆದಿದ್ದಾರೆ.ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಗರಂ ಆದ ನಟ ಅರ್ಜುನ ಕಪೂರ್ ಸಂದರ್ಶಕನ ಕೆನ್ನೆಗೆ ಹೊಡೆದಿದ್ದಾರೆ.ಹುಡುಗಿಯರ ಕ್ಯಾರೆಕ್ಟರ್ ಮಾಡ್ತಿರೋದ್ಯಾಕೆ? ಎಂಬಿತ್ಯಾದಿಯಾಗಿ ಆರ್ ಜೆ ಕೇಳಿದ ಪ್ರಶ್ನೆಗೆ ನಟ ಸಿಡಿಮಿಡಿಗೊಂಡು ಹಲ್ಲೆ ನಡೆಸಿದ್ದಾರೆ ಅಲ್ಲದೇ ಕ್ಯಾಮೆರಾ ಕೂಡ ತಳ್ಳಿ ಬೀಳಿಸಿದ್ದಾರೆ.