ಪಾಕಿಸ್ತಾನದಿಂದ ರಕ್ಷಿಸಲ್ಪಟ್ಟ ಭಾರತೀಯ ಮಹಿಳೆ ಉಜ್ಮಾ ಅಹ್ಮದ್ ಬಯೋಪಿಕ್`ನಲ್ಲಿ ಸುಷ್ಮಾ ಸ್ವರಾಜ್ ಪಾತ್ರದಲ್ಲಿ ಟಬು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳನ್ನ ಸ್ವತಃ ಟಬು ತಳ್ಳಿ ಹಾಕಿದ್ದಾರೆ. ಧೀರಜ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಟಿಸುವಂತೆ ನನ್ನನ್ನ ಯಾರೂ ಕೇಳಿಯೇ ಇಲ್ಲ, ಆ ರೀತಿಯ ಒಂದು ಚಿತ್ರ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಬಾಲಿವುಡ್ ನಟಿ ಟಬು ಹೇಳಿದ್ದಾರೆ. ಇದೇವೇಳೆ, ತಾನು ನಟಿಸುತ್ತಿದ್ದೇನೆಂಬ ಮಾಧ್ಯಮಗಳ ವರದಿಗಳ ಬಗ್ಗೆ ಕಿಡಿ ಕಾರಿರುವ