ಬಾಲಿವುಡ್ ನಟನ ಗೆಳತಿಯ ತಾಯಿಯೊಬ್ಬರು ಆತ್ಮಹತ್ಯೆ ಯೋಚನೆ ಮಾಡಿರುವ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ. ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಗೆಳತಿ, ನಟಿ ರಿಯಾ ಚಕ್ರವರ್ತಿಯ ತಾಯಿ ಸಂಧ್ಯಾ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಒಂದೊಮ್ಮೆ ಬಂದಿದ್ದರು ಎಂದು ಹೇಳಿಕೊಂಡಿದ್ದಾರೆ.ತಮ್ಮ ಮಗಳು ರಿಯಾ ಚಕ್ರವರ್ತಿಯ ಜೈಲಿನ ಬಾರ್ಗಳ ಹಿಂದೆ ನೋಡಿ ತನ್ನ ಜೀವನವನ್ನು ಕೊನೆಗೊಳಿಸುವ ಬಗ್ಗೆ ಯೋಚಿಸಿದ್ದಾಗಿ ತಿಳಿಸಿದ್ದಾರೆ.ಎನ್ ಸಿ ಬಿ ಯಿಂದ ಬಂಧನಕ್ಕೆ ಒಳಗಾದ ಬಳಿಕ ರಿಯಾ ಜೈಲು ಸೇರಿದ್ದಳು.