ನಾನಿ ‘ವಿ’ ಚಿತ್ರ ಪ್ರಸಾರ ಮಾಡದಂತೆ ಅಮೆಜಾನ್ ಪ್ರೈಮ್ ಗೆ ಆದೇಶ ನೀಡಿದ ಬಾಂಬೆ ಹೈಕೋರ್ಟ್

ಹೈದರಾಬಾದ್| pavithra| Last Modified ಶುಕ್ರವಾರ, 5 ಮಾರ್ಚ್ 2021 (15:14 IST)
ಹೈದರಾಬಾದ್ : ಮಾಡೆಲ್ , ಬಾಲಿವುಡ್ ನಟಿ ಸಾಕ್ಷಿ ಮಲಿಕ್ ಅವರ  ಪೋಟೋವನ್ನು ಅವರ  ಒಪ್ಪಿಗೆಯಿಲ್ಲದೆ ಬಳಸಲಾಗಿದೆ ಎಂದು ಹೇಳಲಾದ ದೃಶ್ಯವನ್ನು ನಿರ್ಮಾಪಕರು ಡಿಲೀಟ್ ಮಾಡುವವರೆಗೂ ತೆಲುಗು ಚಿತ್ರ ‘ವಿ’ ಪ್ರಸಾರ ಮಾಡದಂತೆ ಬಾಂಬೆ ಹೈಕೋರ್ಟ್ ಅಮೆಜಾನ್  ಪ್ರೈಮ್ ಇಂಡಿಯಾಕ್ಕೆ ಆದೇಶ ನೀಡಿದೆ.
ಸ್ಟಾರ್ ನಟ ನಾನಿ , ಸುಧೀರ್ ಬಾಬು, ಅದಿತಿ ರಾವ್ ಹೈಡಾರಿ ಮತ್ತು ನಿವೇತಾ ಥಾಮಸ್ ನಟಿಸಿರುವ ‘ವಿ’ ಚಿತ್ರದಲ್ಲಿ ಸೆಕ್ಸ್ ವರ್ಕರ್ಸ್ ಆಗಿ ತನ್ನ ಚಿತ್ರವನ್ನು ಒಪ್ಪಿಗೆಯಿಲ್ಲದೆ  ಬಳಸಲಾಗಿದೆ ಎಂದು ಸಾಕ್ಷಿ ಮಲಿಕ್ ಹೇಳಿಕೊಂಡಿದ್ದು ಫೋಟೊವನ್ನು ತೆಗೆದುಹಾಕುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಫೋಟೊವನ್ನು ಡಿಲೀಟ್ ಮಾಡುವಂತೆ ತಿಳಿಸಿದೆ.>


ಇದರಲ್ಲಿ ಇನ್ನಷ್ಟು ಓದಿ :