ಮನುಷ್ಯನನ್ನು ಅದೆಂತೆಂಥಾ ಸಮಸ್ಯೆಗಳು, ದೈಹಿಕ ಬಾಧೆಗಳು ಕಾಡುತ್ತವೆಯೋ ಹೇಳಲು ಬರುವುದಿಲ್ಲ. ಅದರಲ್ಲಿ ಕೆಲ ಬಗೆಯವುಗಳನ್ನು ಹೇಳಿಕೊಂಡರೆ ಸಮಾಜದ ಕಣ್ಣಲ್ಲಿ ನಗೆಪಾಟಲಿಗೀಡಾಗಬೇಕಾಗುತ್ತದೆ ಅನ್ನೋ ಭಯ ಹಲವರನ್ನು ಕಾಡುತ್ತಿದೆ. ಅಂಥಾದ್ದೇ ಒಂದು ಗುಪ್ತ ಸಮಸ್ಯೆಯಿಂದ ಕಾಡಿಸಿಕೊಂಡು ಕಂಗಾಲಾದ ಪಾತ್ರವೊಂದರ ಸುತ್ತ ಬ್ರಹ್ಮಚಾರಿ ಚಿತ್ರ ಕಥೆ ಕದಲುತ್ತದೆ. ಉದಯ್ ಕೆ ಮೆಹ್ತಾ ನಿಮಾಣದಲ್ಲಿ ಮೂಡಿ ಬಂದಿರೋ ಈ ಚಿತ್ರದಲ್ಲಿ ನೀನಾಸಂ ಸತೀಶ್ ಮಜವಾದೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಯಾವುದೇ ಮುಜುಗರಕ್ಕೂ ಪ್ರೇಕ್ಷಕರು ತುತ್ತಾಗದಂಥಾ ರೀತಿಯಲ್ಲಿ ನಿರ್ದೇಶಕ