ವ್ಯವಹಾರ, ವ್ಯಾಪಾರಗಳನ್ನು ಮೀರಿಕೊಂಡು ಸಿನಿಮಾವನ್ನು ಪ್ರೀತಿಸುವ, ಆರಾಧಿಸುವ ನಿರ್ಮಾಪಕರ ಸಂಖ್ಯೆ ಕಡಿಮೆಯಿದೆ. ಅಂಥಾ ಸದಭಿರುಚಿಯ ನಿರ್ಮಾಪಕರ ಸಾಲಿನಲ್ಲಿ ಉದಯ್ ಕೆ ಮೆಹ್ತಾ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಸಿನಿಮಾ ನಿರ್ಮಾಣಕ್ಕಿಳಿದರೆ ಕಾಸು ಹೂಡಿ ಸುಮ್ಮನೆ ಕೂತುಕೊಳ್ಳೋದು ಉದಯ್ ಮೆಹ್ತಾರ ಜಾಯಮಾನವಲ್ಲ. ಅವರು ಪ್ರತೀ ಸನ್ನಿವೇಷ, ಪಲ್ಲಟಗಳನ್ನೂ ಜೊತೆಗಿದ್ದೇ ಗಮನಿಸುತ್ತಾರೆ. ಯಶಸ್ವೀ ಸಿನಿಮಾದ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿರುವ ಮೆಹ್ತಾ, ಕಥೆಯ ಆಯ್ಕೆಯಲ್ಲಿಯೂ ಭಿನ್ನ ಅಭಿರುಚಿ ಹೊಂದಿರುವವರು. ಬ್ರಹ್ಮಚಾರಿ ಚಿತ್ರದ ಒಂದೆಳೆಯನ್ನು ಆರಂಭಿಕವಾಗಿ