ಮುಕ್ತಾಯ ಕಾಣುತ್ತಿದೆ ಈ ಜನಪ್ರಿಯ ಧಾರವಾಹಿ: ನಾಯಕಿ ಬಿಗ್ ಬಾಸ್ ಗೆ ಎಂಟ್ರಿ?

ಬೆಂಗಳೂರು| Krishnaveni K| Last Modified ಮಂಗಳವಾರ, 16 ಫೆಬ್ರವರಿ 2021 (09:48 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿ ‘ಬ್ರಹ್ಮಗಂಟು’ ಸದ್ಯದಲ್ಲೇ ಮುಕ್ತಾಯ ಕಾಣಲಿದೆ. ಇನ್ನೊಂದು ವಿಶೇಷವೆಂದರೆ ಈ ಧಾರವಾಹಿಯ ನಾಯಕಿ ಪಾತ್ರಧಾರಿ ಗೀತಾ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

 
ಬ್ರಹ್ಮಗಂಟು ಕೆಲವೇ ದಿನಗಳಲ್ಲಿ ಮುಕ್ತಾಯ ಕಾಣಲಿದ್ದು, ಅಂತಿಮ ಚಿತ್ರೀಕರಣ ನಡೆದಿದೆ. ಹೀಗಾಗಿ ನಟಿ ಗೀತಾ ಈ ತಿಂಗಳ ಅಂತ್ಯಕ್ಕೆ ಆರಂಭವಾಗಲಿರುವ ರಿಯಾಲಿಟಿ ಶೋಗೆ ಪ್ರವೇಶ ಪಡೆಯಲಿದ್ದಾರೆ ಎಂಬ ಸುದ್ದಿಯಿದೆ. ಇತ್ತೀಚೆಗೆ ಟಿಆರ್ ಪಿ ಕಡಿಮೆಯಾಗಿರುವ ಬ್ರಹ್ಮಗಂಟು ಕೊನೆಗೂ ಮುಕ್ತಾಯ ಕಾಣುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :