ಬೆಂಗಳೂರು: ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ನಟಿ ರಮ್ಯಾಗೆ ವಿಡಿಯೋ ಮೂಲಕ ತಿರುಗೇಟು ಕೊಡ್ತೀನಿ ಎಂದಿದ್ದ ಬುಲೆಟ್ ಪ್ರಕಾಶ್ ಇದೀಗ ವಿಡಿಯೋ ಮೂಲಕ ಟಾಂಗ್ ಕೊಟ್ಟಿದ್ದಾರೆ.ಫೇಸ್ ಬುಕ್ ನಲ್ಲಿ ವಿಡಿಯೋ ಪ್ರಕಟಿಸಿರುವ ಬುಲೆಟ್ ಪ್ರಕಾಶ್ ವಿಶ್ವವೇ ಮೆಚ್ಚಿರುವ ನಾಯಕ ಪ್ರಧಾನಿ ಮೋದಿ. ಅವರ ಬಗ್ಗೆ ಅಪ್ರಬುದ್ಧ, ಇಲ್ಲಸಲ್ಲದ ಹೇಳಿಕೆ ನೀಡುವ ಮೊದಲು ರಮ್ಯಾ ಪ್ರಬುದ್ಧತೆ ಬೆಳೆಸಿಕೊಳ್ಳಲಿ.ತಮಗೆ ಬುದ್ಧಿ ಇಲ್ಲದೇ ಇದ್ದರೆ ತಮ್ಮದೇ ಪಕ್ಷದಲ್ಲಿ ಹಲವು ರಾಜಕೀಯ ತಜ್ಞರಿರಬಹುದು. ಅವರಿಂದ