ಬೆಂಗಳೂರು: ಯುವ ನಾಯಕ ಧನ್ವೀರ್ ಗೌಡ ಮತ್ತು ಚೆಂದುಳ್ಳಿ ಚೆಲುವೆ ಶ್ರೀಲೀಲಾ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಬೈಟು ಲವ್ ಏಪ್ರಿಲ್ 12 ಕ್ಕೆ ಅಭಿಮಾನಿಗಳಿಗೆ ಸರ್ಪೈಸ್ ಕೊಡಲಿದೆ.ಇಬ್ಬರೂ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ಪಕ್ಕಾ ಲವ್ ಸ್ಟೋರಿ ಸಿನಿಮಾ ‘ಬೈ ಟು ಲವ್’ ಚಿತ್ರದ ಫಸ್ಟ್ ಲುಕ್ ಏಪ್ರಿಲ್ 12 ಕ್ಕೆ ಸಂಜೆ 6 ಗಂಟೆಗೆ ಲಾಂಚ್ ಆಗುತ್ತಿದೆ.ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನಿಮಾ ಪಕ್ಕಾ ರೊಮ್ಯಾಂಟಿಕ್ ಥ್ರಿಲ್ಲರ್.