ಚೆನ್ನೈ : ಡಾ.ರಾಜ್ ಕುಮಾರ್ ಅವರು ಅಭಿನಯಿಸಿದ್ದ ತ್ರಿಮೂರ್ತಿ ಸಿನಿಮಾವನ್ನು ನಿರ್ದೇಶಿಸಿದ ತಮಿಳು ಖ್ಯಾತ ನಿರ್ದೇಶಕ ಸಿ.ವಿ.ರಾಜೇಂದ್ರನ್ ಅವರು ಭಾನುವಾರದಂದು ಕೊನೆಯುಸಿರೆಳೆದಿದ್ದಾರೆ. 81 ನೇ ವಯಸ್ಸಿನ ನಿರ್ದೇಶಕ ಸಿ.ವಿ.ರಾಜೇಂದ್ರನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಭಾನುವಾರದಂದು ನಿಧನರಾಗಿದ್ದಾರೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ. ಇವರು ಕನ್ನಡದಲ್ಲಿ ನಿರ್ದೇಶಿಸಿದ ಮೊದಲ ಸಿನಿಮಾ ಡಾ.ರಾಜ್ ಕುಮಾರ್ ಅವರು ಅಭಿನಯಿಸಿದ್ದ ತ್ರಿಮೂರ್ತಿ ಚಿತ್ರ. ಇದಲ್ಲದೇ ಡಾ.ವಿಷ್ಣುವರ್ಧನ್, ರಜಿನಿಕಾಂತ್ ಮುಖ್ಯಭೂಮಿಯ ಗಲಾಟೆ ಸಂಸಾರ, ದ್ವಾರ್ಕೀಶ್ ನಿರ್ಮಾಣದ