ಚಿತ್ರ ನಿರ್ಮಾಪಕನ ಕಾರು ಕಳ್ಳತನ

ಹೈದರಾಬಾದ್| pavithra| Last Modified ಭಾನುವಾರ, 31 ಜನವರಿ 2021 (11:40 IST)
ಹೈದರಾಬಾದ್ : ಚಿತ್ರ ನಿರ್ಮಾಪಕ ಕರ್ನಾಟಕ ಉದ್ಯಮಿ ಮಂಜುನಾಥ್ ಅವರ ಕಾರು ಕಳ್ಳತನವಾಗಿದೆ ಎಂಬುದಾಗಿ ತಿಳಿದುಬಂದಿದೆ.
ಹೈದರಾಬಾದ್ ಪಾರ್ಕ್ ಹಯಾಟ್ ಹೋಟೆಲ್ ನಲ್ಲಿ ನಿಲ್ಲಿಸಿದ ಕಾರು ಕಣ್ಮರೆಯಾಗಿದೆ. ಈ ಕಾರಿನಲ್ಲಿ 4 ಚೆಕ್ ಪುಸ್ತಕಗಳು, ಪರವಾನಗಿ ಶಸ್ತ್ರಾಸ್ತ್ರ ದಾಖಲೆಗಳು, ನಗದು, ಇತರ ಬೆಲೆಬಾಳುವ ವಸ್ತುಗಳಿದ್ದವು ಎನ್ನಲಾಗಿದೆ. ಈ ಬಗ್ಗೆ ಅವರು ಹೋಟೆಲ್ ಮಾಲೀಕರ ವಿರುದ್ಧ ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕಳ್ಳತನ ದಾಖಲಾಗಿದ್ದು, ತನಿಖೆಗಾಗಿ ಪೊಲೀಸರು ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ.  >


ಇದರಲ್ಲಿ ಇನ್ನಷ್ಟು ಓದಿ :