ಸಂಜನಾ ಆರೋಗ್ಯದಲ್ಲಿ ಏರುಪೇರು, ರಾಗಿಣಿಯನ್ನೂ ಆಸ್ಪತ್ರೆಗೆ ಕರೆತಂದ ಪೊಲೀಸರು

ಬೆಂಗಳೂರು| Krishnaveni K| Last Modified ಗುರುವಾರ, 10 ಸೆಪ್ಟಂಬರ್ 2020 (12:04 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಆರೋಗ್ಯ ತಪಾಸಣೆಗಾಗಿ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

 
ಸಂಜನಾಗೆ ನಿನ್ನೆಯಿಂದಲೂ ಉಸಿರಾಟದ ಸಮಸ್ಯೆ ಕಂಡುಬಂದಿದೆ. ಹೀಗಾಗಿ ಅವರು ಆಸ್ಪತ್ರೆಗೆ ಕರೆದೊಯ್ಯುವಾಗಲೂ ಪೊಲೀಸ್ ವಾಹನದಲ್ಲಿ ಮಲಗಿಕೊಂಡೇ ತೆರಳಿದ್ದರು. ಇನ್ನು, ರಾಗಿಣಿ ಕೂಡಾ ಗ್ಯಾಸ್ಟ್ರಿಕ್ ಸಮಸ್ಯೆ ಬಗ್ಗೆ ಹೇಳುತ್ತಲೇ ಇದ್ದಾರೆ. ಹೀಗಾಗಿ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದು ಪೊಲೀಸರು ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :