ಬೆಂಗಳೂರು : ತಮ್ಮ ಹಾಡುಗಳ ಮೂಲಕ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಬಿಗ್ ಬಾಸ್ ಖ್ಯಾತಿಯ ರ್ಯಾಂಪರ್ ಚಂದನ್ ಶೆಟ್ಟಿ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಇತ್ತೀಚಿಗೆ ಚಂದನ್ ಶೆಟ್ಟಿ ಅಂತ್ಯ ಎಂಬಾ ಶೀರ್ಷಿಕೆಯಡಿ ಹಾಡೊಂದನ್ನು ರಿಲೀಸ್ ಮಾಡಿದ್ದರು. ಈ ಹಾಡು ಮಾದಕವಸ್ತುಗಳ ಸೇವನೆಗೆ ಪ್ರಚೋದಿಸುವಂತಿತ್ತು. ಅದರಲ್ಲೂ ಈ ಹಾಡು ಯುವಕರನ್ನು ಪ್ರಚೋದಿಸುವಂತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇದೀಗ ಚಂದನ್ ಶೆಟ್ಟಿ ಅವರಿಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ